ದ್ವಿತೀಯ ಪಿ.ಯು.ಸಿ. ಉರಿಲಿಂಗಪೆದ್ದಿಯ ವಚನಗಳು ಕನ್ನಡ ನೋಟ್ಸ್ | 2 PUC Urilingapeddiya Vachanagalu Kannada Notes. ಉರಿಲಿಂಗಪೆದ್ದಿ ವಚನಗಳು Notes ತರಗತಿ : ದ್ವಿತೀಯ ಪಿ.ಯು.ಸಿ.
ದ್ವಿತೀಯ ಪಿ.ಯು.ಸಿ. ಉರಿಲಿಂಗಪೆದ್ದಿಯ ವಚನಗಳು ಕನ್ನಡ ನೋಟ್ಸ್ | 2 PUC Urilingapeddiya Vachanagalu Kannada Notes. ಉರಿಲಿಂಗಪೆದ್ದಿ ವಚನಗಳು Notes ತರಗತಿ : ದ್ವಿತೀಯ ಪಿ.ಯು.ಸಿ. ಪದ್ಯದ ಹೆಸರು : ವಚನಗಳು (ಉರಿಲಿಂಗಪೆದ್ದಿಯ ವಚನಗಳು) ಕೃತಿಕಾರರ ಹೆಸರು : ಉರಿಲಿಂಗಪೆ ಕವಿ ಪರಿಚಯ : “ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ” ಎಂಬ ಅಂಕಿತದಲ್ಲಿ ಉರಿಲಿಂಗಪೆದ್ದಿಯ 366 ವಚನಗಳು ಇದುವರೆಗೂ ದೊರೆತಿವೆ . ಈತ ಗೋದಾವರಿ ತೀರದ ಹಳ್ಳಿಯೊಂದರಲ್ಲಿ ವಾಸವಿದ್ದ , ತಂದೆ – ತಾಯಿಗಳು ಇವನಿಗೆ ಪೆದ್ದಣ್ಣ ಎಂಬ ಹೆಸರಿಟ್ಟರು . ಕಳ್ಳತನ ಮಾಡಿಕೊಂಡು ಜೀವಿಸುತ್ತಿದ್ದ . ಈತ ಒಮ್ಮೆ ಉರಿಲಿಂಗದೇವರ ಮನೆಗೆ ಕನ್ನ ಹಾಕಿದ . ಆಗ ಉರಿಲಿಂಗದೇವರು ನಂದವಾಡ ಗ್ರಾಮದ ಸೂರಯ್ಯನಿಗೆ ದೀಕ್ಷೆ ನೀಡುತ್ತಿದ್ದರು . ಇದನ್ನು ಕಂಡು ಮನಃ ಪರಿವರ್ತನೆ ಹೊಂದಿದ ಪೆದ್ದಣ್ಣ ದಿನವೂ ಉರಿಲಿಂಗಪೆದ್ದಿಗಳ ಮಠಕ್ಕೆ ಒಂದು ಹೊರೆ ಸೌದೆ ತಂದು ಹಾಕುತ್ತಿದ್ದ . ಕೊನೆಗೊಂದು ದಿನ ಗುರುವನ್ನು ಕಾಡಿ ಬೇಡಿ ದೀಕ್ಷೆಯನ್ನು ಪಡೆದು ‘ ಉರಿಲಿಂಗಪೆದ್ದಿ ‘ ಎಂಬ ಹೆಸರನ್ನು ಧರಿಸಿ ಗುರುವಿಗೆ ತಕ್ಕ ಶಿಷ್ಯನಾದನು . ಗುರುವಿನ ನಂತರ ಸಕಲಶಾಸ್ತ್ರ ಪಾರಂಗತನಾಗಿ ತಾನೇ ಆ ಪೀಠಕ್ಕೆ ಒಡೆಯನಾದ ಮಹಾನುಭವಿ ಈತ . ಚಿಂತೆಯಿಲ್ಲದ ಅತಿಶ್ರೇಷ್ಠನಾದ ಮನಸ್ಥಿತಿಯನ್ನು ಶಿವಧ್ಯಾನದಿಂದ ಸಾಧಿಸ ಬಹುದೆಂಬುದನ್ನು ಮಂಗಳಕರವಾದ ಅಂಗದ ಸಾಂಗತ್ಯವುಳ್ಳವನೆಂದೂ ಬೇರೆಯವರ ಬಗ್ಗೆ ಚಿಂತಿಸನೆಂಬುದನ್ನು ...